image description


ಸೌಕರ್ಯಯಗಳು ಮತ್ತು ಕ್ಷೇಮ

ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕಂಪನಿಯು ತಾನು ಕಾರ್ಯನಿವಹಿಸುತ್ತಿರುವ ಸ್ಥಳದಲ್ಲಿ ವಾಸಕ್ಕೆ ಸ್ಥಳ ಒದಗಿಸುವುದು, ವೈದ್ಯಕೀಯ ಸವಲತ್ತುಗಳು, ಸಹಕಾರಿ ಸಂಘದ ಮಾರಾಟ ಮಳಿಗೆ, ವಿದ್ಯಾಭ್ಯಾಸಕ್ಕೆ ಅನುಕೂಲತೆಗಳು. ಅರಣ್ಯೀಕರಣ, ಪರಿಸರ ಹಾಗೂ ಇತರ ಸೌಲಭ್ಯಗಳಾದ (ಸಹಾಯಧನದ) ರಿಯಾಯ್ತಿ ದರದಲ್ಲಿ ಕ್ಯಾಂಟೀನ್, ಕುಡಿಯುವ ನೀರು, ವಿದ್ಯುತ್ ಸರಬರಾಜು, ಆಟದ ಮೈದಾನಗಳು, ಸಮುದಾಯ ಭವನ, ತಿಂಗಳಿಗೆ ೫ ಕಿಲೋ ಸೋನಾಮಸೂರಿ ಅಕ್ಕಿ, ೨ ಕಿಲೋ ತೊಗರಿ ಬೇಳೆ, ೧ ಕೆಜಿ ಸಕ್ಕರೆ, ೧ ಕೆಜಿ ಸೂರ್ಯಕಾಂತಿ ಎಣ್ಣೆ, ಉರುವಲು(ಸೌದೆ) ಖರ್ಚಿಗೆ ತಿಂಗಳಿಗೆ ೨೦೦ ರೂ ಇತ್ಯಾದಿಗಳನ್ನು ಒದಗಿಸುತ್ತಿದೆ. ಕಂಪನಿಯು ತನ್ನ ಕ್ಯಾಂಪಸ್ಸಿನಲ್ಲಿರುವ ಸಿಬ್ಬಂದಿ/ನೌಕರರು, ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸಲು ಡಿಷ್ ಅಂಟೆನ್ನಾ ಜೋಡಿಸಿದ್ದು ಉಚಿತವಾಗಿ ಕೇಬಲ್ ಸೌಲಭ್ಯ ಪೂರೈಸಿದೆ. ಕ್ಯಾಂಪಸ್ಸಿನಿಂದ ಹೊರಗಡೆ ವಾಸವಾಗಿರುವವರಿಗೆ ಟಿ.ವಿ. ಕೇಬಲ್ ಸೇವೆಗೆ ತಿಂಗಳಿಗೆ ೧೫೬/-ರೂ.ಗಳನ್ನು ಪಾವತಿಸಲಾಗುತ್ತಿದೆ. ಬ್ಯಾಂಕ್, ಅಂಚೆ, ಕಚೇರಿ, ಸಹಕಾರಿ ಮಾರಾಟ ಮಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಕಾಲಕಾಲಕ್ಕೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.