image description


ಸಮುದಾಯ ಕ್ಷೇಮ

ಹಟ್ಟಿಯು ೧೨೦ ಹಾಸಿಗೆಗಳ ಸಾಮರ್ಥ್ಯದ ಅತಿ ನವೀನ ಆಸ್ಪತ್ರೆಯನ್ನು ಹೊಂದಿರುತ್ತದೆ. ಹಟ್ಟಿಯಲ್ಲಿ ಈಗಿರುವ ಆಸ್ಪತ್ರೆಯಲ್ಲಿ ಹವಾ ನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕ, ಇಸಿಜಿ, ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕ್ಯಾನರ್, ಡಿಫೈಬ್ರಿಲೇಟರ್ ಜೊತೆಗೆ ಹೃದಯಬಡಿತ ಮಾನಿಟರ್, ಆಟೋ ಅನಲೈಸರ್, ಶ್ವಾಸಕೋಶ ಕಾರ್ಯ ಪರೀಕ್ಷಿಸುವ ಕಂಪ್ಯೂಟರ್, ರಕ್ತನಿಧಿ, ವೆಂಟಿಲೇಟರ್ ಇತ್ಯಾದಿಗಳಿದ್ದು, ೨೦ ಮಂದಿ ತಜ್ಞ ಹಾಗೂ ತಜ್ಞರಲ್ಲದ ವೈದ್ಯರು ಮತ್ತು ೧೨೭ ಅರೆ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ.

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಕಂಪನಿಯ ಸಿಬ್ಬಂದಿ, ನೌಕರರಿಗೆ ಅವರ ಆಶ್ರಯಿತರಿಗೆ ಮತ್ತು ಸಾರ್ವಜನಿಕರಿಗೆ ಅಸದಳ ಸೇವೆಯನ್ನು ಒದಗಿಸುತ್ತಿದೆ. ೨೦೦೮ನೇ ವರ್ಷದಲ್ಲಿ ಕಂಪನಿ ಆಸ್ಪತ್ರೆಯು ಸರ್ಕಾರಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಲವು ರೋಗ ನಿರೋಧಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು. ಆಸ್ಪತ್ರೆಯಲ್ಲಿ ಕಣ್ಣು ಪರೀಕ್ಷೆ, ಆರೋಗ್ಯ ಪರೀಕ್ಷೆ, ರಕ್ತದಾನ ಶಿಬಿರ ಇತ್ಯಾದಿಗಳನ್ನು ಏರ್ಪಡಿಸುತ್ತದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಆಸ್ಪತ್ರೆಯು ಸುತ್ತಮುತ್ತಲ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಎರ್ಪಡಿಸಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಆರೋಗ್ಯ ಸೇವೆಯನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ಇರಾದೆಯುಳ್ಳದ್ದಾಗಿರುತ್ತದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.