image description


ಪುಡಿ ಮಾಡುವುದು

ಗಣಿಗಳ ಅದಿರನ್ನು ಮುಖ್ಯವಾಗಿ ಪಕ್ಕದ ೧೦೦೦ ಟನ್ ಸಾಮರ್ಥ್ಯದ ಮಲ್ಲಪ್ಪ ಶಾಫ್ಟ್ಸ್ ಓರ್-ಬಿನ್ ನಿಂದ ತರಲಾಗುತ್ತಿದೆ. ಇತರ ಶಾಫ್ಟುಗಳಿಂದ ಭೂಮಟ್ಟದ ೨೦೦ ಟನ್ ಸಾಮರ್ಥ್ಯದ ಓರ್ ಬಿನ್ನಿಗೆ ಜೋಡಿಸಿದ ಚೈನ್ ಫೀಡರ್ ಮತ್ತು ಕನ್ವೇಯರ್ ಬೆಲ್ಟ್ ಮೂಲಕ ತರಲಾಗುತ್ತಿದೆ.

ಆರ್ ಒ ಎಮ್ ನ್ನು ಮೂರು ಹಂತಗಳಲ್ಲಿ ೧೦ಮಿಮಿ ಅಳತೆಗೆ ಪುಡಿ ಮಾಡಲಾಗುವುದು. ಮೊದಲ ಹಂತದಲ್ಲಿ ಮೂರು ಕೆನ್-ಕೆನ್-ಜಾ-ಕ್ರಷರ್ ಗಳಿದ್ದು, ಅವು ಪ್ರಾಥಮಿಕ ಕ್ರಷರುಗಳಾಗಿ ಕಾರ್ಯನಿರ್ವಹಿಸಿ, ಪುಡಿ ಮಾಡಿದ ಅದಿರು ೨೦೦ ಟನ್ನಿನಲ್ಲಿ ಸಂಗ್ರಹಿಸಲಾಗುವುದು. ಎರಡನೇ ಹಂತದಲ್ಲಿ ಮೂರು ಅಡಿಯ ಎರಡು ಸ್ಟಾಂಡರ್ಡ್ ಕೋನ್ ಕ್ರಷರುಗಳು ಎರಡನೇ ಹಂತದ ಕ್ರಷರುಗಳಾಗಿ ಕಾರ್ಯ ನಿರ್ವಹಿಸುತ್ತವೆ. ತೃತೀಯ ಹಂತದಲ್ಲಿ ಎರಡು, ೩ ಅಡಿಯ ಷಾರ್ಟ್ ಹೆಡ್ ಮತ್ತು ಎರಡು ೪ ಅಡಿಯ ಷಾರ್ಟ್ ಹೆಡ್ ಸೈಮನ್ ಕೋನ್ ಕ್ರಷರುಗಳಿರುತ್ತವೆ. ಈ ಕ್ರಷರುಗಳು ಒಂದು ಅದುರುವ ಜರಡಿಗೆ ಜೋಡಿಸಲ್ಪಟ್ಟಿರುತ್ತವೆ. ಪುಡಿ ಮಾಡಿದ ಅದಿರನ್ನು ಅರೆಯುವ ಯಂತ್ರಕ್ಕೆ ಕಳುಹಿಸುವ ಮೊದಲು ೧೫೦೦ ಟನ್ ಸಾಮರ್ಥ್ಯದ ನುಣ್ಣನೆ ಅದಿರಿನ ಬಿನ್ನಿನಲ್ಲಿ ಸಂಗ್ರಹಿಸಲಾಗುವುದು. ಸ್ವಯಂ ಚಾಲಿತ ಮಾದರಿ ಸಂಗ್ರಾಹಕ, ತೂಕಮಾಪಕ ಮತ್ತು ವೇ ಬ್ರಿಡ್ಜುಗಳು ಉತ್ಪಾದನೆಗೆ ಸರಬರಾಜಾದ ಕಚ್ಚಾ ಮಾಲಿನ ವಿವರಗಳನ್ನು ಒದಗಿಸುತ್ತವೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.