image description


ಸೈಯನೈಡ್ ಬಳಕೆ ಮತ್ತು ಕಾರ್ಬನ್ ಇನ್ ಪಲ್ಪ್ ವಿಧಾನ

ಎರಡೂ ತಾಂತ್ರಿಕ ವಿಧಾನಗಳಿಂದ ತುಂಬಿ ಹರಿಯುವ ಸೈಕ್ಲೋನ್ ಅನ್ನು, ಹೆಚ್ಚಿನ ಅನವಶ್ಯಕ ನೀರನ್ನು ತೆಗೆಯುವ ಮೂಲಕ ಗಟ್ಟಿಗೊಳಿಸಿ, ಕರಗಿದ ಚಿನ್ನವನ್ನು ವಾಪಸ್ಸು ಪಡೆಯಲು ಇಂಗಾಲದ ಕಾಲಂಗಳ ಮೂಲಕ ಹಾಯಿಸಲಾಗುತ್ತದೆ. ಗಟ್ಟಿಗೊಳಿಸಿದ ಪಲ್ಪ್ ಅನ್ನು ಸೈಯನೈಡ್ ಜೊತೆ ಮಿಶ್ರಣ ಮಾಡಿ ಷ್ಕಾರ ಮಾಧ್ಯಮದ ಮೂಲಕ ಕಲಕುವ ಯಂತ್ರಗಳ ಮೂಲಕ ತೊಳೆದು ಹೋಗುವಂತೆ(ಲೀಚಿಂಗ್) ಮಾಡಲಾಗುತ್ತದೆ. ಈ ವಿಧಾನದಲ್ಲಿ ಆಮ್ಲಜನಕವನ್ನು ಉತ್ತಮಗೊಳಿಸಲು, ಮತ್ತು ಲೀಚಿಂಗ್ ಗೆ ಅನುಕೂಲವಾಗಲು ಹೈಡ್ರೋಜನ್ ಪಿಕಾಸೈಡಿನೊಂದಿಗೆ ಒತ್ತಡದ ಗಾಲಿಯನ್ನು ಉಪಯೋಗಿಸಲಾಗುತ್ತದೆ. ಸೈಯನೈಡ್ ತೆಗೆದ ಗಟ್ಟಿ ರಾಡಿಯನ್ನು(ಪಲ್ಪ್) ಕಾರ್ಬನ್-ಇನ್-ಪಲ್ಪ್ ಘಟಕಕ್ಕೆ ಕಳುಹಿಸಿ ಆಕ್ಟಿವೇಟೆಡ್ ಇಂಗಾಲದ ತೆಳುಗಂಜಿಯೊಡನೆ ಕಲಕಲಾಗುತ್ತದೆ. ಕರಗಿದ ಚಿನ್ನವು ನಂತರ ಇಂಗಾಲದ ಮೇಲೆ ಸೋಡಿಯಂ ಆರೋ ಸೈಯನೈಡ್ ರೂಪದಲ್ಲಿ ಹೀರಲ್ಪಡುತ್ತದೆ. ಚಿನ್ನ ಹೀರಲ್ಪಟ್ಟ ಇಂಗಾಲವನ್ನು ಕಾಲಕಾಲಕ್ಕೆ ಕಾರ್ಬನ್-ಇನ್-ಪಲ್ಪ್ ಘಟಕದಿಂದ ತೆಗೆದು, ನೀರಿನಲ್ಲಿ ತೊಳೆದು ಆಮ್ಲ(ಆಸಿಡ್) ಮತ್ತು ಷ್ಕಾರ(ಆಲ್ಕಲೈನ್)ಅಳೊಡನೆ ಉಪಚರಿಸಲಾಗುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.