image description


ಜೈವಿಕ ಪ್ರತಿಕ್ರಿಯಾ ಪ್ರಾಜೆಕ್ಟಿನ ಪ್ರದರ್ಶನ

ಶುದ್ಧ ಚಿನ್ನದ ಅದಿರು ದೊರೆಯುವುದು ಕಡಿಮೆಯಾದ ಪ್ರಯುಕ್ತ ರಿಫ್ರ್ಯಾಕ್ಟರಿ ಅದಿರಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಪಡೆಯಲು ಕೇಂದ್ರ ಸರಕಾರದ ಜೈವಿಕ ತಾಂತ್ರಿಕತೆಯ ಇಲಾಖೆಯ ಸಹಕಾರ/ಸಹಭಾಗಿತ್ವದೊಂದಿಗೆ ಪ್ರದರ್ಶನ ಜೈವಿಕ ಪ್ರತಿಕ್ರಿಯಾ ಯಂತ್ರವನ್ನು ಸ್ಥಾಪಿಸಲಾಗಿದೆ.

ರಿಫ್ರ್ಯಾಕ್ಟರಿ ಅದಿರನ್ನು ಸಾಂದ್ರೀಕೃತ ಕರಗಿಸುವ ವಿಧಾನ ಅನುಸರಿಸಲು ಇರುವ ಅವಕಾಶಗಳು ಕಡಿಮೆಯಾದ ಕಾರಣ, ಜೈವಿಕ ಸವಕಳಿಯಂತಹ ಬದಲೀ ಮಾರ್ಗವನ್ನು ಅನುಸರಿಸುವುದನ್ನು ಬೆಂಬತ್ತಬೇಕಾಗಿದೆ.

ಭಾರತದಲ್ಲೇ ಮೊದಲನೆಯದೆನ್ನಬಹುದಾದ ಜೈವಿಕ ಪ್ರತಿಕ್ರಿಯಾ ಯಂತ್ರ ಸ್ಥಾಪನೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ದೊಡ್ಡ ಪ್ರಯತ್ನವನ್ನೇ ಮಾಡಿದೆ. ಚಿನ್ನದ ಅದಿರು ದೇಶಿಯ ರೂಪದಲ್ಲಿದ್ದು, ಬೆಣಚು ಕಲ್ಲಿನ ಮೇಟ್ರಿಕ್ಸ್ ನಂತಹ ಅದಿರಿನಲ್ಲಿ ಹರಡಿ ಹೋಗಿದ್ಡು(ಫ್ರೀ ಮಿಲ್ಲಿಂಗ್ ಅದಿರು ಎಂದು ಕರೆಯಲಾಗುವ) ಸಾಂಪ್ರದಾಯಿಕ ಕ್ರಮದಲ್ಲಿ ಸೈನೈಡ್ ಸಂಗಡ ಪ್ರತಿಕ್ರಿಯಿಸಿ ಚಿನ್ನ+ಸೈನೈಡಿನ ಕರಗುವ ಸಂಯುಕ್ತ ವಸ್ತುವನ್ನಾಗಿಸುವುದು. ಚಿನ್ನದ ಅದಿರು ರಿಫ್ರ್ಯಾಕ್ಟರಿ ಸ್ವಭಾವದ್ದೆಂದು ಕಂಡುಬಂದಲ್ಲಿ ಅಂದರೆ ಪೈರೈಟ್ ಮತ್ತು ಆರ್ಸಿನೋ ಪೈರೈಟ್ ನಂತಹ ಸಲ್ಫೈಡ್ ಗಳೊಂದಿಗೆ ಜೊತೆಗೂಡಿದ್ದಾಗ, ಮುಂಚಿತವಾಗಿ ಜೈವಿಕ ಪ್ರತಿಕ್ರಿಯೆಗೊಳಪಡಿಸದೇ ಸೈನೈಡೇಷನ್ ಪ್ರಕ್ರಿಯೆಗೊಳಪಡಿಸಿದಾಗ ಚಿನ್ನದ ಉತ್ಪತ್ತಿಯು ಕೇವಲ ಶೇ.೮೦-೯೦ಕ್ಕಿಂತ ಹೆಚ್ಚು ಮಾಡಬಹುದು. ಅಜ್ಜನಹಳ್ಳಿ ಮತ್ತು ಜಿ.ಆರ್.ಹಳ್ಳಿಯಲ್ಲಿ ಸಿಗುವ ರಿಫ್ರ್ಯಾಕ್ಟರಿ ಅದಿರು ಸಂಸ್ಕರಣೆಗೆ ದೊಡ್ಡ ಪ್ರಮಾಣದ ಡೆಮಾನ್ಸ್ಟ್ರೇಟರ್ ಪ್ಲಾಂಟ್ ಆಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.