image description


ಇಂಜಿನಿಯರಿಂಗ್ ವಿಭಾಗ(ಇಲಾಖೆ)

ಯಂತ್ರೋಪಕರಣಗಳ ಸ್ಥಾಪನೆಗೆ, ಮಧ್ಯದಲ್ಲಿ ಕೆಟ್ಟಾಗ ಸರಿಪಡಿಸಲು, ಗಣಿ ತೋಡುವ ಯಂತ್ರಗಳು, ವಿದ್ಯುತ್ ಉಪಕರಣಗಳು/ಮೋಟಾರುಗಳು, ಎತ್ತಿ ನಿಲ್ಲಿಸುವ ಯಂತ್ರಗಳು, ಮಣ್ಣು ತೆಗೆಯುವ/ಸಾಗಿಸುವ ವಾಹನಗಳು/ಉಪಕರಣಗಳು, ಡೀಸಲ್ ವಿದ್ಯುತ್ ಉತ್ಪಾದನಾ ಜನರೇಟರುಗಳು ಸಿವಿಲ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರಿಂಗ್ ಇಲಾಖೆಯನ್ನು ಸ್ಥಾಪಿಸಲಾಗಿದೆ.

ಯಂತ್ರೋಪಕರಣಗಳನ್ನು ರಿಪೇರಿ ಮಾಡಲು, ಸುಸ್ಥಿತಿಯಲ್ಲಿಡಲು ಇಂಜಿನಿಯರಿಂಗ್ ಇಲಾಖೆಯು ಸುಧಾರಿತ ಹೊಸ ವಿಧಾನಗಳನ್ನು ಅಳವಡಿಸುತ್ತಿದೆ. ಇಂಜಿನಿಯರಿಂಗ್ ಇಲಾಖೆಯು ಯಂತ್ರೋಪಕರಣಗಳನ್ನು ಬಳಸುವ ವಿಭಾಗಗಳರವರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಇಲಾಖೆಯು ಉಪಕರಣಗಳನ್ನು ಅತ್ಯಂತ ಸಮರ್ಥವಾಗಿ/ತೃಪ್ತಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತಿದೆ. ಹಾಗೆ ಮಾಡುವಲ್ಲಿ ಮಿತವ್ಯಯದ ಬಗ್ಗೆ ಗಮನಹರಿಸಲಾಗಿರುತ್ತದೆ.

ಇಂಜಿನಿಯರಿಂಗ್ ಇಲಾಖೆಯು ಹಳೆಯದಾದ/ಕೆಲಸಕ್ಕೆ ಬಾರದ ಯಂತ್ರೋಪಕರಣಗಳನ್ನು ಅತ್ಯಂತ ಸೂಕ್ತ ಸಮಯದಲ್ಲಿ, ಅವುಗಳನ್ನು ಸುಸ್ಥಿಯಲ್ಲಿಡುವ ಖರ್ಚುವೆಚ್ಚಗಳನ್ನು ಪರಿಗಣಿಸಿ, ಇಂಜಿನಿಯರುಗಳು ಒಟ್ಟಾಗಿ ಚರ್ಚಿಸಿ ಸೂಕ್ತ ಸಮಯದಲ್ಲಿ ಬದಲಾಯಿಸಲು/ವಿಲೇವಾರಿ ಮಾಡಲು ನಿರ್ಧಾರ ತೆಗೆದುಕೊಳ್ಳುವರು. ಯಂತ್ರೋಪಕರಣಗಳನ್ನು ಜೋಡಿಸುವುದು/ಸುಸ್ಥಿತಿಯಲ್ಲಿಡುವುದನ್ನು, ಗಣಿಗಳ ಕಾಯ್ದೆ ಮತ್ತು ವಿದ್ಯುತ್ ನಿಯಮಗಳಂತೆ ಕಾರ್ಯರೂಪಕ್ಕೆ ತಂದು ಅವುಗಳನ್ನು ಕ್ರಮವಾಗಿ ಬರೆದಿಡಲಾಗುವುದು. ಹೀರಾಬುದ್ದಿನ್ನಿ ಮತ್ತು ಊಟಿ ಪ್ರಾಜೆಕ್ಟುಗಳಲ್ಲಿ ಕೈಗೆತ್ತಿಕೊಳ್ಳುವ ಎಲ್ಲಾ ಇಂಜಿನಿಯರಿಂಗ್ ಕಾಮಗಾರಿಗಳಿಗೆ ಇಂಜಿನಿಯರಿಂಗ್ ಇಲಾಖೆಯು ನೆರವಾಗುವುದು. ಎಲ್ಲಾ ಯಂತ್ರೋಪಕರಣಗಳ ಉಸ್ತುವಾರಿಗೆ ಒಂದು(ಕಂಡೀಷನ್ ಮಾನಿಟೋರಿಂಗ್) ಟೀಂ ಅನ್ನು ರೂಪಿಸಲಾಗಿದೆ. ಈ ಯಂತ್ರೋಪಕರಣಗಳ ಸ್ಥಿತಿ ಬಗ್ಗೆ ಸಂಬಂಧಪಟ್ಟವರಿಗೆ ಪ್ರತಿದಿನ ತಿಳಿಸುವುದು. ಈ ಕಂಡೀಷನ್ ಮಾನಿಟೋರಿಂಗ್ ಟೀಮ್ ಇಲಾಖೆಯ ಮುಖ್ಯಸ್ಥರಿಗೆ ನೇರವಾಗಿ ವರದಿ ಸಲ್ಲಿಸುವುದು.

ಇಂಜಿನಿಯರಿಂಗ್ ಇಲಾಖೆಯನ್ನು ಸುಗಮ ಮತ್ತು ಸಮರ್ಥ ಕಾರ್ಯನಿರ್ವಹಣೆಗೆ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.