image description


ಭವಿಷ್ಯದ ಯೋಜನೆಗಳು

ಹಟ್ಟಿ ಗಣಿ

  • ಈಗಿರುವ ಶಾಫ್ಟುಗಳನ್ನು ಅಳವಡಿಸುವುದು, ಜೊತೆಗೆ ಸಂಬಂಧಿಸಿದ ಕಾರ್ಯಗಳಾದ ಕೋರ್ಸ್ ಓರ್ ಬಿನ್ ಪುಡಿಗುಟ್ಟುವ ಛೇಂಬರ್ಸ್, ನುಣ್ಣನೆಯ ಅದಿರಿನ ಬಿನ್, ಬೆಲ್ಟ್ ಮೇಲೆ ಸಾಗಾಣಿಕೆ ಮತ್ತು ಮೆಷರಿಂಗ್ ಫ್ಲಾಸ್ಕ್ ಗಳನ್ನು ಹಟ್ಟಿ ಗಣಿಗಳಲ್ಲಿ ಅಳವಡಿಸುವುದು.
  • ಡೈಮಂಡ್ ಡ್ರಿಲ್ ಮೂಲಕ ೨೪ರ ಮಟ್ಟದಿಂದ ೩೦ನೇ ಮಟ್ಟದವರೆಗೆ ಪ್ರಾಥಮಿಕ ಅಭಿವೃದ್ಧಿ.
  • ಹಟ್ಟಿಯ ದಕ್ಷಿಣ ಭಾಗದಲ್ಲಿ ವಿವರವಾದ ಅನ್ವೇಷಣಾ ಗಣಿಗಾರಿಕೆ.
  • ವಿವರವಾದ ಮೇಲ್ಪದರದ ಅನ್ವೇಷಣೆ - ಡೈಮಂಡ್ ಡ್ರಿಲ್ ಮೂಲಕ ಹಟ್ಟಿ ಉತ್ತರಕ್ಕೆ(ಮೇಜರ್ ಢಯಕ್ಕಿನ ಉತ್ತರ ಭಾಗಕ್ಕೆ).
  • ಮುಖ್ಯ ಗಣಿಯ ಮೇಯಿನ್ ರೀಫ್ ನ ಅಭಿವೃದ್ಧಿ.
  • ಗ್ರೇ ಶಾಫ್ಟಿನ ಅಭಿವೃದ್ಧಿ.
  • ಹಟ್ಟಿಯ ಪೂರ್ವದ ಹೊಸ ರೀಫ್ ನ ಅಭಿವೃದ್ಧಿ
  • ಹಟ್ಟಿಯ ಗಣಿಯಲ್ಲಿ ಸಿಗಬಹುದಾದ ಅದಿರಿನ ಅನ್ವೇಷಣೆಗೆ ಮೇಲ್ಪದರದ ಮತ್ತು ಭೂಮಿಯೊಳಗೆ ಡೈಮಂಡ್ ಡ್ರಿಲ್ಲಿಂಗ್, ಚಿನ್ನದ ಅದಿರು ಹರಡಿರುವ ದಿಕ್ಕು ಮತ್ತು ಆಳವನ್ನು ಕಂಡುಹಿಡಿಯುವುದು.
  • ದಿನಕ್ಕೆ ೨೦೦೦ ಟನ್ನುಗಳ ಸಂಸ್ಕರಣಾ ಸಾಮರ್ಥ್ಯದ ಸ್ಯಾಗ್ ಮತ್ತು ಬಾಲ್ ಮಿಲ್ ಸ್ಥಾಪನೆಯು ಪ್ರಗತಿಯಲ್ಲಿದ್ದು ೨೦೦೯ರ ಮೇ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
  • ಹಟ್ಟಿ ಚಿನ್ನದ ಗಣಿಗಳಲ್ಲಿ ೨೦೦೦ ಅಡಿಯವರೆಗೆ ಈಗಿರುವ ಅದಿರು ೨೦೧೧ರ ವೇಳೆಗೆ ಮುಗಿಯಬಹುದೆಂದು ನಿರೀಕ್ಷಿಸಲಾಗಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ತನ್ನ ಎರಡನೇ ಹಂತದ ವಿಸ್ತರಣೆ ಮತ್ತು ನವೀಕರಣ ಕಾರ್ಯಕ್ರಮವಾಗಿ ೨೦೦೦ ಅಡಿಗಳಿಂದ ೨೬೦೦ ಅಡಿ ಆಳದವರೆಗೆ ಅಭಿವೃದ್ಧಿ ಪಡಿಸುತ್ತಿದೆ. ಭೂಮಿ ಒಳಗಡೆ ೨೬೦೦ ಅಡಿಗಳಿಂದ ೩೦೦೦ ಅಡಿವರೆಗೆ ಅಭಿವೃದ್ಧಿ ಪಡಿಸಲು ಊಹಿಸಲಾಗಿದ್ದು, ಅದಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ವಿಸ್ತರಣೆ ಮತ್ತು ಆಧುನೀಕರಣದಿಂದ ಗಣಿಯು ಮುಂದಕ್ಕೆ ಇನ್ನಷ್ಟು ದಿನ ಕಾರ್ಯನಿರ್ವಹಿಸುವುದು.
  • ಎಂಟರಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಅನ್ನು ಅಳವಡಿಸುವುದು.

DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.