image description


ಅರೆಯುವುದು

ಮಿಲ್ ಸಾಮರ್ಥ್ಯ - ದಿನಕ್ಕೆ ೧೯೫೦ ಟನ್ನುಗಳು

ಚಿನ್ನದ ಅದಿರನ್ನು ಹಟ್ಟಿಯಲ್ಲಿ ಅರೆಯಲು ಎರಡು ವಿಶಿಷ್ಟ ಅರೆಯುವ ತಾಂತ್ರಿಕತೆಗಳನ್ನು ಅಳವಡಿಸಿದೆ.

ಮೊದಲ ತಾಂತ್ರಿಕತೆಯಲ್ಲಿ ಎರಡು ಹಂತಗಳಲ್ಲಿ ಅರೆಯಲಾಗುವುದು. ಒಂದು ಪ್ರಾಥಮಿಕ ಗಿರಣಿ ಮತ್ತು ಮೂರು ದ್ವಿತೀಯ ಟ್ಯೂಬ್ ಮಿಲ್ಲುಗಳು ಕೂಡಿ ಅರೆಯುವ ಒಂದು ಸ್ಟ್ರೀಮ್(ಪ್ರವಾಹ)ವಾಗುವುದು. ಅಂತಹ ಎರಡು ಸ್ಟ್ರೀಮುಗಳಿವೆ. ಈ ಯಂತ್ರಗಳಿಂದ (ಗಿರಣಿ) ಹೊರತಳ್ಳಿದ ಪುಡಿಯನ್ನು ಸ್ಟ್ರೇಕ್ ಟೇಬಲ್ ಮೇಲೆ ಹಾಸಿದ ಬ್ಲಾಂಕೆಟ್ ಗಳ ಮೇಲೆ ಹರಿಬಿಡಲಾಗುವುದು. ಆಗ ಒರಟು ಚಿನ್ನವು ಗುರುತ್ವಾಕರ್ಷಣ ವಿಧಾನದಿಂದ ಪ್ರತ್ಯೇಕಿಸಲ್ಪಡುವುದು ಮತ್ತು ಈ ವ್ಯವಸ್ಥೆಯು ಪ್ರದಕ್ಷಣಾ ವಿಧಾನದಲ್ಲಿ ಜೋಡಿಸಲ್ಪಟ್ಟಿರುತ್ತದೆ.

ಎರಡನೇ ತಾಂತ್ರಿಕತೆಯಲ್ಲಿ, ಒಂದಕ್ಕೊಂದು ಜೋಡಿಸಲಾದ ನಾಲ್ಕು ಪ್ರತ್ಯೇಕ ಬಾಲ್ ಮಿಲ್ಲುಗಳಲ್ಲಿ ಸೈಕ್ಲೋಸ್ ಕ್ಲಾಸಿಫಿಕೇಷನ್ ವಿಧಾನದಲ್ಲಿ ಒಂದೇ ಹಂತದಲ್ಲಿ ಅರೆಯುವುದನ್ನು ಮಾಡಲಾಗುವುದು. ಗಿರಣಿಯಿಂದ(ಮಿಲ್ ನಿಂದ) ಹೊರಬಂದ ಉತ್ಪನ್ನವನ್ನು ನೆಲ್ಸನ್ ಕಾನ್ಸಂಟ್ರೇಟರುಗಳ ಮೂಲಕ ಕಳುಹಿಸುವುದರ ಮೂಲಕ ಅದರಲ್ಲಿನ ಚಿನ್ನವನ್ನು ಮತ್ತೆ ಉನ್ನತೀಕರಿಸಿ ಬಿಸಿಗೆ ಕರಗಬಲ್ಲ ಚಿನ್ನ ಉತ್ಪಾದಿಸಲಾಗುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.