image description


ಆರೋಗ್ಯ ಕಾಳಜಿ

ಹಟ್ಟಿಯಲ್ಲಿ ವಿವಿಧ ಹಂತಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ನೌಕರರಿದ್ದು, ಹಟ್ಟಿ ಚಿನ್ನದ ಗಣಿಗಳಿಂದಾಗಿ ಕೈಗಾರಿಕಾ ಬೆಳವಣಿಗೆಯಾಗಿದ್ದು, ನೌಕರಿಗಳು ದೊರೆಯುವ ಸಾಧ್ಯತೆಗಳು ಹೆಚ್ಚಾಗಿ, ಇನಫ್ರಾಸ್ಟ್ರಕ್ಚರ್ ಅಭಿವೃದ್ಧಿಯಾಗಿದೆ. ಹಟ್ಟಿ ಗ್ರಾಮವೊಂದರಲ್ಲೇ ೨೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುತ್ತದೆ. ಕಂಪನಿಯು ಪರಿಣಾಮಕಾರಿ ವೈದ್ಯಕೀಯ ನೆರವಿನ ಯೋಜನೆ ಹೊಂದಿದೆ. ಕಂಪನಿಯು ತನ್ನ ನೌಕರರಿಗೆ, ಅವರ ಆಶ್ರಿತರಿಗೆ ಮತ್ತು ಸಾರ್ವಜನಿಕರಿಗೆ ಪರಿಣಾಮಕಾರಿ ಸೇವೆಗಳನ್ನು, ಮಮತೆ ಮತ್ತು ಕಾಳಜಿಯಿಂದ ಒದಗಿಸುವುದನ್ನು ಮುಂದುವರಿಸುತ್ತಿದೆ.

ಆರೋಗ್ಯ ಮತ್ತು ಆರೋಗ್ಯ ಪಾಲನೆ ಬಗ್ಗೆ ನಿರಂತರವಾಗಿ ಶಿಕ್ಷಣ ಕೊಡುವ ಕಾರ್ಯಕ್ರಮದಂತೆ ಏಡ್ಸ್, ಧೂಮಪಾನ, ಮದ್ಯಸೇವನೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಹೇಳಲಾಗುವುದು. ಇನಸ್ಟಿಟ್ಯೂಟ್, ಕ್ಲಬ್ ಇತ್ಯಾದಿಗಳಲ್ಲಿ ಜಾಗೃತಿ ಕಾರ್ಯಕ್ರಮವಾಗಿ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಏಡ್ಸ್ ಬಗ್ಗೆ ಜಾಗೃತಿ/ಸಮಾಧಾನ ಹೇಳುವ ಕಾರ್ಯಕ್ರಮಗಳನ್ನು ಶಿಬಿರಗಳು ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ನಡೆಸಲಾಗುವುದು. ವಿವಿಧ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಕಾರ್ಯಕ್ರಮಗಳಾದ ಪಲ್ಸ್ ಪೋಲಿಯೋ, ಕುಟುಂಬ ಯೋಜನೆ, ಫಿಲೇರಿಯಾ, ಮಕ್ಕಳ ಆರೋಗ್ಯ ತಪಾಸಣೆ, ಚರ್ಮರೋಗ ಆರೋಗ್ಯ ತಪಾಸಣೆ, ಕ್ಷಯ, ಕುಷ್ಠ ಇತ್ಯಾದಿ ರೋಗಗಳ ಜಾಗೃತಿ ಕಾರ್ಯಕ್ರಮಗಳನ್ನು ಆಸ್ಪತ್ರೆಯ ಮುಖಾಂತರ ನಡೆಸಲಾಗುವುದು. ಸಾಮಾಜಿಕ ಭದ್ರತೆ ಕಾರ್ಯಕ್ರಮವಾಗಿ ಕೆಲಸಗಾರರಿಗೆಲ್ಲಾ ಒಂದೊಂದು ಲಕ್ಷದ ವೈಯುಕ್ತಿಕ ಅಪಘಾತ ವಿಮೆ ಇಳಿಸಲಾಗಿದೆ. ಅಧಿಕಾರಿಗಳಿಗೆ ೫ ಲಕ್ಷದ ವಿಮೆ ಇಳಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.