image description


ಹೀರಾ ಬುದ್ದಿನ್ನಿ ಚಿನ್ನದ ಗಣಿ

ಈ ಗಣಿಯು ಜಾಗತಿಕ ಮಟ್ಟದ ಹಟ್ಟಿ ಚಿನ್ನದ ಗಣಿಯಿಂದ ಪೂರ್ವಕ್ಕೆ ೨೦ಕಿ.ಮೀ. ದೂರದಲ್ಲಿದೆ. ಈ ನಿಕ್ಷೇಪವನ್ನು ಜಿ.ಎಸ್.ಐ.ಯಿಂದ ಕಂಡು ಹಿಡಿಯಲಾಗಿದೆ. ಜಿ.ಎಸ್.ಐ.ಯವರ ಪೂರ್ವಭಾವಿ ಅನ್ವೇಷಣೆಯಿಂದ ದೊರೆತ ಫಲಿತಾಂಶಗಳಿಂದ ಉತ್ತೇಜಿತರಾಗಿ, ಕಾರ್ಯಸಾಧ್ಯತೆ ಸಾಮೂಪ್ಯಾಗಳನ್ನು ಗಮನದಲ್ಲಿಟ್ಟುಕೊಂಡು, ಹಟ್ಟಿ ಚಿನ್ನದ ಗಣಿ ನಿಯಮಿತವು ಕಾಲುವೆ ರೀತಿ, ವಜ್ರ ಕೊರೆತ ವಿಧಾನಗಳಿಂದ ಆಳವಾದ(ವಿವರವಾದ) ಅನ್ವೇಷಣೆ ಕೈಗೊಳ್ಳಲಾಯಿತು. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಇಲ್ಲಿ ೨೧.೮೨ ಹೆ. ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನಂ.ಎಂ.ಎಲ್. ನಂ.೨೫೭೮ರಲ್ಲಿ ದಿನಾಂಕ ೨೯.೩.೨೦೦೮ ರಿಂದ ೨೮.೩.೨೦೨೮ ರ ಅವಧಿಗೆ ಗುತ್ತಿಗೆ ಪಡೆದಿರುತ್ತದೆ. ಅನ್ವೇಷಣಾ ಗಣಿ ಅಭಿವೃದ್ಧಿ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಪ್ರಾಯೋಗಿಕ ಸ್ಟೋಪಿಂಗ್ ಕಾರ್ಯಗಳು ೨೦೦೯-೨೦೧೦ರಲ್ಲಿ ಪ್ರಾರಂಭವಾಗುತ್ತವೆ. ಈ ಗಣಿಯು ಚಿನ್ನದ ಗಣಿ ಉಪಗಣಿಯಾಗಿ ಕಾರ್ಯನಿರ್ವಹಿಸುತ್ತಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.