image description


ಗಣಿಯ ಚರಿತ್ರೆ

೧೮೮೭ - ಹೈದರಾಬಾದ್ ನಿಜಾಮನಿಗೋಸ್ಕರ ಗಣಿಯನ್ನು 'ಹೈದರಾಬಾದ್ ಡೆಕ್ಕನ್ ಕಂಪನಿ'ಯು ಚಿನ್ನದ ಗಣಿಗಾರಿಕೆಯನ್ನು ಕೈಗೆತ್ತಿಕೊಂಡಿತು.

೧೮೮೦-೧೯೨೦ ಜಾನ್ ಟೈಲರ್ಸ್ ಮತ್ತು ಮಕ್ಕಳಿಂದ ಆಧುನಿಕ ಗಣಿಗಾರಿಕೆ ಕೈಗೊಳ್ಳಲಾಯಿತು. ೧೯೦೨ರಿಂದ ೧೯೧೮ರ ಅವಧಿಯಲ್ಲಿ ಮೆಯಿನ್ ರೀಫ್ ಒಂದೇ ೩.೮ಲಕ್ಷ ಟನ್ ಅದಿರು ಉತ್ಪಾದಿಸಿ, ೭.೪೧ ಟನ್ ಚಿನ್ನವನ್ನು ಟನ್ನಿಗೆ ೧೯.೪೫ ಗ್ರಾಂ.ದರದಲ್ಲಿ ಉತ್ಪಾದಿಸಿತು ಮತ್ತು ಗಣಿಯನ್ನು ೧೦೫೨ಮೀ. ಆಳಕ್ಕೆ ಕೊರೆಯುಲಾಯಿತು.

೧೯೨೦ - ಸಾಮಗ್ರಿಗಳ ಕೊರತೆ, ಹಣದ ಮುಗ್ಗಟ್ಟು ಮತ್ತು ಒಂದನೇ ಜಾಗತಿಕ ಯುದ್ಧದಿಂದಾಗಿ ಗಣಿಯನ್ನು ಮುಚ್ಚಲಾಯಿತು.

೧೯೩೮ - ಭೂಗರ್ಭ ಮತ್ತು ಭೂಭೌತ ನಿಯಮಗಳ ಪ್ರಕಾರ ವಿವರವಾದ ಅನ್ವೇಷಣೆ ಜೊತೆಗೆ ವಿಲ್ಲೇಜ್ ರೀಫ್ ಗಣಿಯಲ್ಲಿ ಡೈಮಂಡ್ ಡ್ರಿಲ್ಲಿಂಗ್ ಮತ್ತು ನೀರನ್ನು ಖಾಲಿ ಮಾಡಿದ್ದರಿಂದ ಜೋನ್ - ೧ ಮತ್ತು ಓಕ್ಲೇ ರೀಫುಗಳನ್ನು ಪುನಃ ಕಂಡುಹಿಡಿಯಲಾಯಿತು.

೧೯೪೭ - ೧೯೪೭ರ ಜುಲೈ ೮ರಂದು 'ಹೈದರಾಬಾದ್ ಚಿನ್ನದ ಗಣಿಗಳ ಕಂಪನಿ ನಿಯಮಿತ'ವನ್ನು ಸಂಘಟಿಸಿ ಗಣಿಗಾರಿಕೆ ಕೆಲಸಗಳನ್ನು 'ಜಾನ್ ಟೇಲರ್ ಮತ್ತು ಮಕ್ಕಳು' ಅವರಿಗೆ ಹೈದರಾಬಾದ್ ನಿಜಾಮರು ವಹಿಸಿಕೊಟ್ಟರು.

೧೯೫೬ - ರಾಜ್ಯಗಳ ಪುನರ್-ವಿಂಗಡಣೆಯಿಂದ ಮೈಸೂರು(ಈಗಿನ ಕರ್ನಾಟಕ) ರಾಜ್ಯ ಉದಯವಾದಾಗ ಅದರ ಹೆಸರನ್ನು 'ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ' ಎಂದು ಮರುನಾಮಕರಣ ಮಾಡಲಾಯಿತು.

೧೯೬೬ - ಚಿನ್ನ ವ್ಯಾಪಾರ ಮತ್ತು ಚಿನ್ನದ ಕೈಗಾರಿಕೆ ಮೇಲೆ ಭಾರತ ಸರಕಾರವು 'ಭಾರತೀಯ ಚಿನ್ನ ನಿಯಂತ್ರಣ ಕಾಯ್ದೆ ೧೯೬೬'ರ ಮೂಲಕ ಕಠಿಣವಾದ ನಿರ್ಬಂಧಗಳನ್ನು ಹೇರಿತು.

೧೯೭೧ - ಅದರ ರಜತ ಮಹೋತ್ಸವ ವರ್ಷದಲ್ಲಿ ದಿನಕ್ಕೆ ೩೦೦ ಟನ್ನುಗಳಿಂದ ೯೧೦ ಟನ್ನುಗಳಿಗೆ ಹೆಚ್ಚಿಸಲಾಯಿತು.

೧೯೮೫ - ನಷ್ಟದಲ್ಲಿ ನಡೆಯುತ್ತಿದ್ದ ಎರಡು ತಾಮ್ರದ ಗಣಿಗಳು 'ಚಿತ್ರದುರ್ಗ ತಾಮ್ರದ ಕಂಪನಿ' ಮತ್ತು 'ಕರ್ನಾಟಕ ಕಾಪರ್ ಕನ್ಸಾರ್ಟಿಯಮ್ ಲಿಮಿಟೆಡ್',ಕಲ್ಯಾಡಿಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದೊಡನೆ ಸೇರಿಸಲಾಯಿತು. ಆ ರೀತಿ ಕಂಪನಿಯು ತಾಮ್ರದ ಗಣಿಗಾರಿಕೆ ಮತ್ತು ತಾಮ್ರದ ಪಾಕದ ಉತ್ಪಾದನೆಯನ್ನು ಆರಂಭಿಸಿತು.

೧೯೯೨ - ಚಿನ್ನದ ನಿಯಂತ್ರಣ ಕಾಯ್ದೆಯನ್ನು ತೆಗೆದುಹಾಕಲಾಯಿತು ಮತ್ತು ಚಿನ್ನದ ಆಮದಿಗೆ ಮುಕ್ತ ಅವಕಾಶ ನೀಡಿದ್ದರಿಂದ ಭಾರತೀಯ ಚಿನ್ನದ ಬೆಲೆಯಲ್ಲಿ ಸ್ಥಿರತೆ ಉಂಟಾಯಿತು.

೧೯೯೬ - ಮಿಲ್ ನಲ್ಲಿ ಕಾರ್ಬನ್-ಇನ್-ಪಲ್ಪ್ ತಾಂತ್ರಿಕತೆಯನ್ನು ಪರಿಚಯಿಸಲಾಯಿತು

೧೯೯೭ -ಅದರ ಸುವರ್ಣ ಮಹೋತ್ಸವ ವರ್ಷದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಅದರ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಸಲುವಾಗಿ, ಆಧುನೀಕರಣ ಮತ್ತು ವಿಸ್ತರಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿತು ಮತ್ತು ಚಿತ್ರದುರ್ಗದ ತಾಮ್ರದ ಘಟಕವನ್ನು ಚಿನ್ನದ ಘಟಕವನ್ನಾಗಿ ಪರಿವರ್ತಿಸಲಾಯಿತು.

೧೯೯೮-೯೯ ಮತ್ತು ೨೦೦೦ - ಹಂತ ಹಂತವಾಗಿ ಬಾಲ್ ಮಿಲ್ ಜೋಡಣೆ/ಸೇರ್ಪಡೆ.

೨೦೦೨-೦೪ - ದೊಡ್ಡ ಅಜಿಟೇಟರುಗಳ ಸೇರ್ಪಡೆ(೧೧ಮೀ. ವ್ಯಾಸ x ೧೧.೫ಮೀ. ಎತ್ತರ).

೨೦೦೫ - ಮರಳು ತುಂಬಿಸುವ ವ್ಯವಸ್ಥೆಯಲ್ಲಿ ಸುಧಾರಣೆ, ಡಿ-ಟಾಕ್ಸಿಫಿಕೇಷನ್ ಪ್ಲಾಂಟ್, ನ್ಯೂ ಹೈ ರೇಟ್ ತಿಕ್ಕನರ್ ಮತ್ತು ಕಾಲಂ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.