image description


ಮಂಗಳೂರು ಚಿನ್ನದ ಗಣಿ

ಈ ಗಣಿಯು ಜಾಗತಿಕ ಮಟ್ಟದ ಹಟ್ಟಿ ಚಿನ್ನದ ಗಣಿಯಿಂದ ಉತ್ತರಕ್ಕೆ ೮೦ಕಿ.ಮೀ. ದೂರದಲ್ಲಿದೆ. ಈ ನಿಕ್ಷೇಪವನ್ನು ಜಿ.ಎಸ್.ಐ. ಮತ್ತು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಅನ್ವೇಷಿಸಿದವು. ಇಲ್ಲಿ ಗಣಿಗಾರಿಕೆ ನಡೆಸಲು ಆದೇಶ ಸಂಖ್ಯೆ ಎಂ.ಎಲ್.೧೩೦೫ರಲ್ಲಿ ದಿನಾಂಕ ೧೨.೨.೧೯೭೬ರಿಂದ ೧೧.೨.೧೯೯೬ರ ಅವಧಿಗೆ ೫೫.೭೫ ಹೆ.ಪ್ರದೇಶಕ್ಕೆ ಗುತ್ತಿಗೆ ದೊರೆತಿದೆ. ಈ ಗಣಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ೧೨.೨.೧೯೭೬ರಿಂದ ೧೧.೨.೧೯೯೬ರವರೆಗೆ ಗಣಿಗಾರಿಕೆ ನಡೆಸಿತು. ಕಾರ್ಯಸಾಧ್ಯವಲ್ಲದ(ಕಡಿಮೆ ಉತ್ಪನ್ನದಿಂದ) ಹಾಗೂ ವಿಪರೀತ ನೀರು ತುಂಬಿಕೊಳ್ಳುತ್ತಿದ್ದ ಕಾರಣದಿಂದ (ಗಂಟೆಗೆ ೧೨೦೦೦ಲೀ.) ಮಂಗಳೂರು ಚಿನ್ನದ ಗಣಿಯನ್ನು ದಿನಾಂಕ ೨೬.೪.೧೯೯೬ರಲ್ಲಿ ಮುಚ್ಚಲಾಯಿತು. ಗಣಿಗಾರಿಕೆಯ ಗುತ್ತಿಗೆ ಅವಧಿಯ ನವೀಕರಣಕ್ಕೆ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಸರ್ಕಾರದ ಬಳಿ ಪರಿಶೀಲನೆಯಲ್ಲಿರುತ್ತದೆ. ಅಲ್ಲಿ ಅನ್ವೇಷಣಾ ಗಣಿಗಾರಿಕೆ, ಆಳವಾಗಿ ವಜ್ರ ಕೊರೆತ ವಿಧಾನಗಳಿಂದ ಇರಬಹುದಾದ ನಿಕ್ಷೇಪವನ್ನು ಕಂಡು ಹಿಡಿಯಲು ಯೋಜನೆ ರೂಪಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.