image description


ಗಣಿ ಕೊರೆಯುವ ವಿಧಾನ

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಏಕ ಪ್ರಕಾರವಾಗಿ ಹೆಚ್ಚುತ್ತಾ ಸಾಗಿದೆ. ಈ ಕಾರ್ಯದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಅಗತ್ಯವಾದ ತಾಂತ್ರಿಕ ಕುಶಲತೆಯನ್ನು ಅಭಿವೃದ್ಧಿಪಡಿಸಲು ಸಮರ್ಥವಾಗಿದೆ ಮತ್ತು ಬೆಳವಣಿಗೆ ಹಾಗು ಅಭಿವೃದ್ಧಿಗಳಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಷ್ಟು ವರ್ಷಗಳಲ್ಲಿ ಕಂಪನಿಯು ಗಣಿಗಾರಿಕೆ ಮತ್ತು ಚಿನ್ನದ ಉತ್ಪಾದನೆಯ ತಾಂತ್ರೀಕತೆಯ ಉನ್ನತೀಕರಣದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಿಂದ ತನ್ನ ಉತ್ಪಾದನಾ ವಿಭಾಗಳಲ್ಲಿ ಉನ್ನತಮಟ್ಟದ ಸ್ಪರ್ಧಾತ್ಮಕತೆ ತೋರಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಅದಿರನ್ನು ತೆಗೆಯುವ ಗಣಿಗಾರಿಕೆ ವಿಧಾನಗಳನ್ನು ಅಳವಡಿಸುವುದರಿಂದ ಉದಾ: ಮಟ್ಟದ (ದ್ವಿತೀಯ) ಗಣಿಗಾರಿಕೆ ನಡೆಸುವುದರಿಂದ ಉನ್ನತ ಸುರಕ್ಷತೆ ಮತ್ತು ಉತ್ಪಾದನೆಯನ್ನು ಸಾಧಿಸಲಾಗಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.