image description


ಹೊಸ ಶಾಫ್ಟುಗಳಿಗೆ ಪ್ರಸ್ತಾವನೆಗಳು

ಪರಿಚಯ

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಹಟ್ಟಿ ಚಿನ್ನದ ಗಣಿಯೇ ಭೂ ಒಳಗಿನ ಮುಖ್ಯ ಗಣಿ.

ಮೂರು ಶಾಫ್ಟುಗಳು, ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಶಾಫ್ಟ್, ವಿಲ್ಲೇಜ್ ಶಾಫ್ಟುಗಳು ಹಟ್ಟಿ ಗಣಿಯ ಭೂ ಒಳಗಿನ ಕೆಲಸಗಳಿಗೆ ಸೇವೆ ಒದಗಿಸುತ್ತಿವೆ.

ಮಲ್ಲಪ್ಪ ಶಾಫ್ಟ್ ಮತ್ತು ಸೆಂಟ್ರಲ್ ಶಾಫ್ಟುಗಳು ಭೂಮಿಗೆ ಲಂಬವಾಗಿದ್ದು, ಅಡ್ಡಕೊಯ್ತದಲ್ಲಿ ಧೀರ್ಘವೃತ್ತಾಕಾರದಲ್ಲಿರುತ್ತದೆ.

ಮಲ್ಲಪ್ಪ ಶಾಫ್ಟ್ ಮತ್ತು ಸೆಂಟ್ರಲ್ ಶಾಫ್ಟುಗಳು ಮುಖ್ಯ ಇನ್ ಟೇಕ್ ಶಾಫ್ಟುಗಳಾಗಿದ್ದು ಗಾಳಿಯಾಡಲು ಉಪಯೋಗವಾಗುತ್ತಿದ್ದು, ೨೬ನೇ ಮಟ್ಟದಿಂದ ಎರಡನೇ ಹಂತದಲ್ಲಿ ಇನ್ನೂ ಅಳವಡಿಸಲು ಉದ್ದೇಶಿಸಲಾಗಿದೆ.

ಮಲ್ಲಪ್ಪ ಶಾಫ್ಟ್

ಇದು ಭೂಮಟ್ಟದಲ್ಲಿ ೬.೧ಮೀ x ೨.೧೩ಮೀ ಅಳತೆಯದಿದ್ದು, ಮುಖ್ಯವಾದ ಉತ್ಪಾದನಾ ಘಟಕವಾಗಿದ್ದು, ಹಟ್ಟಿ ಗಣಿಗಳ ಭೂಮಿಯೊಳಗಿನ ಒಟ್ಟು ಉತ್ಪಾದನೆಯಲ್ಲಿ ಶೇ.೮೦ ಭಾಗ ಉತ್ಪಾದಿಸುತ್ತದೆ.

ಮಲ್ಲಪ್ಪ ಶಾಫ್ಟ್ ನಲ್ಲಿ ಎರಡು ವೈಂಡರುಗಳಿದ್ದು, ಎರಡೂ ೨೪ನೇ ಮಟ್ಟದವರೆಗೆ ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಒಂದು ವೈಂಡರು(ಹೊಸ ವೈಂಡರು) ಕೇವಲ ಅದಿರನ್ನು ಮೇಲೆತ್ತಲು ಮಾತ್ರ ಉಪಯೋಗಿಸಿ, ಇನ್ನೊಂದನ್ನು(ಹಳೆಯ ವೈಂಡರು) ಜನರನ್ನು, ಸರಕುಗಳನ್ನು, ಅದಿರು ಮತ್ತು ಅನುಪಯುಕ್ತ ಕಲ್ಲನ್ನು ಎತ್ತಲು ಉಪಯೋಗಿಸಲಾಗುತ್ತಿದೆ.

ಸೆಂಟ್ರಲ್ ಶಾಫ್ಟ್

ಸೆಂಟ್ರಲ್ ಶಾಫ್ಟ್ ಮೇಲ್ಮೈ ೩.೭೬ಮೀ. x ೧.೮೩ಮೀ. ವಿಸ್ತೀರ್ಣವಿದೆ. ಇದು ೨೬ನೇ ಮಟ್ಟದಲ್ಲಿ (೮೭೧.೯೦ಮೀ ಆಳ) ೩೦ಮೀ. ಇರುತ್ತದೆ.

ವಿಲ್ಲೇಜ್ ಶಾಫ್ಟ್

ಇದು ಓರೆ ಶಾಫ್ಟ್ ಆಗಿದ್ದು, ೧೫ನೇ ಮಟ್ಟದವರೆಗೆ ಇಳಿದಿದೆ. ಮೇಲ್ಮಟ್ಟದ ಕೆಲಸಗಳನ್ನು ಮುಗಿಸಿದ ಬಳಿಕ, ಪಂಪ್ ಮಾಡಲು ಮತ್ತು ಕೆಲಸಗಾರರನ್ನು ಇಳಿಸಲು ಮತ್ತು ಮೇಲೆತ್ತಿಕೊಳ್ಳುವ ಮಟ್ಟಿಗೆ ಇದರ ಕೆಲಸವನ್ನು ಸೀಮಿತಗೊಳಿಸಲಾಗಿದೆ.

ಪರ್ಯಾಯವಾಗಿ ಈ ಶಾಫ್ಟನ್ನು ೧೫ನೇ ಮಟ್ಟದಿಂದ ವಿನ್ಜ್ ಮೂಲಕ ೨೦ನೇ ಮಟ್ಟದವರೆಗೆ ಅನಂತರ ೩೦ನೇ ಮಟ್ಟದವರೆಗೆ ಗಾಳಿಯ ಇನಟೇಕ್ ಆಗಿ ಬಳಸಬಹುದು.

ಹಟ್ಟಿ ಚಿನ್ನದ ಗಣಿಗಳಲ್ಲಿ ಎರಡನೇ ಔಟ್ ಲೆಟ್ ವಿಧಾನವು, ಗಣಿಯ ಆಳ ಹೆಚ್ಚಾದ ಪ್ರಯುಕ್ತ ಪರಿಣಾಮಕಾರಿಯಿಲ್ಲವಾಗಿದೆ ಮತ್ತು ಈಗಿನ ಜನಬಲ ಉಪಯೋಗಿಸಿ ಚಕ್ರಸುತ್ತುವ ವಿಧಾನದಿಂದ ಅವಸರದ ಸಂದರ್ಭದಲ್ಲಿ ಒಳಗಿಂದ ಜನರನ್ನು ನಿರೀಕ್ಷಿಸಿದ ಸಮಯದಲ್ಲಿ ಹೊರತರಲು ಸಾಧ್ಯವಾಗುವುದಿಲ್ಲ.

ಆಳ ಹೆಚ್ಚಾದ ಹಾಗೆ ಕೆಲಸಗಾರರನ್ನು ಒಳಗೆ ಇಳಿಸಲು ಮತ್ತು ಮೇಲೆ ಎತ್ತಲು ಈಗಿನ ಕಡಿಮೆ ಸಾಮರ್ಥ್ಯದ ಕೇಜ್ ವೈಂಡರಿನಿಂದ ಕಷ್ಟವಾಗುತ್ತಿದೆ. ಇದೇ ದೊಡ್ಡ ಸಮಸ್ಯೆ. ಆದ್ದರಿಂದ ಕೆಲಸದ ಗಂಟೆಗಳನ್ನು/ಸಮಯವನ್ನು ಹೆಚ್ಚಿಸಲು, ಹೆಚ್ಚಿನ ಸಂಖ್ಯೆಯ ಜನರನ್ನು ಆಳಕ್ಕೆ ಇಳಿಸುವುದು ಮತ್ತು ಮೇಲಕ್ಕೆ ಎತ್ತುವ ಕೆಲಸ ಶೀಘ್ರವಾಗಿ ಆಗಬೇಕಾಗಿರುತ್ತದೆ. ಇದಕ್ಕೆ ವೇಗವಾಗಿ ಕೆಲಸ ಮಾಡುವ ದೊಡ್ಡ ವೈಂಡರ್ ಮತ್ತು ದೊಡ್ಡ ಕೇಜ್ ಬೇಕಾಗಿರುತ್ತವೆ.

ಇಲ್ಲಿ ಸೂಚಿಸಬಹುದಾದ ಒಂದು ಅಂಶವೆಂದರೆ, ಈ ಶಾಫ್ಟನ್ನು ಜೋಡಿಸಿಕೊಡದ ಹೊರತು ೩೦ನೇ ಮಟ್ಟಕ್ಕಿಂತ ಗಣಿ ಉತ್ಪಾದನೆ ಸಾಧ್ಯವಾಗದೇ ಹೋಗಬಹುದು. ಏಕೆಂದರೆ ಜನರನ್ನು ಇಳಿಸುವುದು, ಮೇಲೆತ್ತುವುದು, ಗಾಳಿಸಂಚಾರದ ತೊಂದರೆಗಳಿಂದ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುವುದನ್ನು ೨೬ನೇ ಮಟ್ಟಕ್ಕೆ ವಿಸ್ತರಿಸಿದಾಗಲೂ ಕಾಣಬಹುದು.

ದೊಡ್ಡ ಉಪಕರಣಗಳನ್ನು ಇಳಿಸಲು ಮೇಲೆ ಸೂಚಿಸಿದ ಯಾವುದೇ ಶಾಫ್ಟಗೆ ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ಉದಾ: ಮಲ್ಲಪ್ಪ ಶಾಫ್ಟನಲ್ಲಿ ಎಲ್.ಹೆಚ್.ಡಿ.ಯನ್ನು ಇಳಿಸುವಾಗ, ಎಲ್.ಹೆಚ್.ಡಿ.ಯ ಕೆಲವು ಭಾಗಗಳು ಕೆಳಗಿಳಿಸುವ ಮೊದಲೇ ತುಂಡಾದ್ದರಿಂದ ಭೂಮಿಯ ಒಳಗೇ ವೆಲ್ಡಿಂಗ್ ಮಾಡಬೇಕಾಯಿತು.

ಮಲ್ಲಪ್ಪ ಶಾಫ್ಟ್ ಮತ್ತು ಮಧ್ಯದ ವೈಂಡರುಗಳು ಹಳೆಯದಾಗಿರುವುದರಿಂದ ಸುರಕ್ಷಿತವಾದ ಹೊಸ ವೈಂಡರುಗಳನ್ನು ಜೋಡಿಸುವುದು ಅಗತ್ಯವಾಗಿರುತ್ತದೆ.

ಈ ಮೇಲಿನ ಸಮಸ್ಯೆಗಳಿಂದ ಹೊರಬರಲು ದೊಡ್ಡದಾದ ಕ್ರಾಸ್ ಸೆಕ್ಷನ್ ಇರುವ ಹೊಸ ಶಾಫ್ಟ್ ಇಳಿಸುವುದು/ಕೊರೆಸುವುದು ಜರೂರಾಗಬಹುದು.

ಈ ಕ್ರಮದಿಂದ ಹೆಚ್ಚಿನ ಹೂಡಿಕೆ ಮಾಡಬೇಕಾಗಿಬಂದರೂ, ಆಳದಿಂದ ಸುರಕ್ಷಿತವಾಗಿ ಗಣಿಗಾರಿಕೆ ನಡೆಸುವುದರಿಂದ ಉತ್ಪಾದನೆ ಹೆಚ್ಚಿ, ಹೂಡಿದ ಬಂಡವಾಳಕ್ಕೆ ತಕ್ಕ ವರಮಾನ ಬರುತ್ತದೆ.

ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವಿಸಲಾದ ಹೊಸ ಶಾಫ್ಟಿನ ವಿನ್ಯಾಸ ಮತ್ತು ಕಾರ್ಯ ಕೆಳಗಿನಂತಿರಬೇಕು :

  • ಒಂದು ಸಲಕ್ಕೆ ಗಣಿಯೊಳಗೆ ಒಂದು ಟ್ರಿಪ್ ಗೆ ಸುಮಾರು ೧೦೦ ಜನರು ಹೋಗಿ ಬರುವಂತಿರಬೇಕು.
  • ಚೆನ್ನಾಗಿ ಗಾಳಿಯ ಓಡಾಟಕ್ಕೆ ಬೇಕಾದಷ್ಟು ಶುದ್ಧ ಗಾಳಿಯನ್ನು ಗಣಿಯೊಳಗೆ ತಳ್ಳುವಂತಿರಬೇಕು.
  • ದೊಡ್ಡ ಉಪಕರಣಗಳನ್ನು ಕೆಳಗಿಳಿಸುವ ಸಾಮರ್ಥ್ಯವಿರಬೇಕು.
  • ಇದೇ ಮುಖ್ಯ ಔಟ್-ಲೆಟ್ ಆಗಿದ್ದು, ಮಲ್ಲಪ್ಪ ಶಾಫ್ಟ್ ಎರಡನೇ ಔಟ್-ಲೆಟ್ ಆಗಿ ಕಾರ್ಯನಿರ್ವಹಿಸಬೇಕು. ಕನಿಷ್ಟ ಎರಡು ಔಟ್-ಲೆಟ್ ಗಳು ಇಲ್ಲದೇ ಯಾವುದೇ ಗಣಿ ಕೆಲಸ ನಿರ್ವಹಿಸುವುದಿಲ್ಲ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.