image description


ಉತ್ಪಾದನಾ ಕ್ರಮ

ಹಾಲಿ ಚಿನ್ನ ಇರುವ ಐದು ಬಂಡೆ ಸಾಲುಗಳಿಂದ ಚಿನ್ನದ ಅದಿರು ತೆಗೆಯುವ ಕಾರ್ಯನಡೆಯುತ್ತಿದೆ. ಅವು ಸ್ಟ್ರೈಕ್ ರೀಫ್, ಹೆಚ್/ಡಬ್ಲ್ಯೂ ಮತ್ತು ಎಫ್/ಡಬ್ಲ್ಯೂ , ಝಡ್1 ರೀಫ್ ಮಧ್ಯದ ರೀಫ್ ಮತ್ತು ಓಕ್ಲೇಸ್ ರೀಫ್. ಸ್ಟ್ರೈಕ್ ರೀಫ್, ಹ್ಯಾಂಗ್ ವಾಲ್ ಮತ್ತು ಫುಟ್ ವಾಲ್ ಗಳು ೧೫ ಎಲ್ ನಲ್ಲಿ ಒಂದುಗೂಡಿ ಸ್ಟ್ರೈಕ್ ರೀಫ್ ಹ್ಯಾಂಗ್ ವಾಲ್ ಹೆಸರಿನ ಒಂದೇ ರೀಫ್ ಆಗುತ್ತದೆ. ರೀಫುಗಳು ಸಮಾನಾಂತರವಾಗಿ ಹೋಗುತ್ತಾ ೬೨ರಿಂದ ೭೨ಕ್ಕೆ ಸಮೀಪಕ್ಕೆ ಬರುತ್ತವೆ. ಅವುಗಳ ಅಗಲವು ೨.೫ ಮೀಟರಿನಿಂದ ೨೦ ಮೀ.ವರೆಗೆ ವಿಸ್ತಾರಗೊಳ್ಳುತ್ತದೆ. ಸರಾಸರಿ ೫ರಿಂದ ೮ ಮೀಟರುಗಳು ಎಲ್ಲ ರೀಫುಗಳಲ್ಲಿ ವಿವಿಧ ಆಳಗಳಲ್ಲಿ ಏಕಕಾಲದಲ್ಲಿ ಗಣಿಗಾರಿಕೆ ಮಾಡುತ್ತಿದ್ದು ೫.೫ ರಂದ ೬.೦ ಗ್ರಾಂ ಪ್ರತೀ ಟನ್ನಿಗೆ ದೊರೆಯುಂತೆ ನೋಡಿಕೊಳ್ಳಲಾಗುತ್ತಿದೆ. ಹಳೆ ಗಣಿಯಾದ ಕಾರಣ ಶಾಫ್ಟ್ ಗಳು ಮತ್ತು ಅಧಿಕ ಉತ್ಪತ್ತಿ ಮಾಡಬಲ್ಲ ಸಲಕರಣೆಗಳನ್ನು ಇಳಿಸಲು ಕಷ್ಟವಾದ ಕಾರಣ ಸಾಧಾರಣವಾದ ಯಾಂತ್ರೀಕರಣ ಮಾಡಲಾಗಿದೆ. ಗಣಿಯಿಂದ ದಿನವೊಂದಕ್ಕೆ ೦೩೦೦ ರಿಂದ ೦೪೦೦ ಟನ್ ಅದಿರನ್ನು ಉತ್ಪಾದಿಸಲಾಗುತ್ತಿದೆ.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.