image description


ಎರಡನೇ ಹಂತದ ಗಣಿಗಾರಿಕೆ

ಹಟ್ಟಿ ಚಿನ್ನದ ಗಣಿಯು ಮೊದಲ ಹಂತದ ಗಣಿಗಾರಿಕೆಯಿಂದ ೨೦ನೇ ಮಟ್ಟದವರೆಗೆ ದಿನವೊಂದಕ್ಕೆ ಸರಾಸರಿ ೧೪೦೦ ಟನ್ನುಗಳನ್ನು ಉತ್ಪಾದಿಸುತ್ತಿದೆ. ಮೇಲ್ಮಟ್ಟದ ನಿಕ್ಷೇಪವು ನಿಧಾನವಾಗಿ ಖಾಲಿಯಾಗುತ್ತಿರುವುದರಿಂದ ಆಳದಲ್ಲಿನ ನಿಕ್ಷೇಪಗಳನ್ನು ಹೊರತೆಗೆದು ಟನ್ನಿಗೆ ೫ಗ್ರಾಂ ನಂತೆ ಚಿನ್ನ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ.

ಗುರಿ ಪ್ರಕಾರ ಉತ್ಪಾದನೆ ಸಾಧಿಸಲು ೨೦ನೇ ಮಟ್ಟದಿಂದ ಕೆಳಗೆ ಗಣಿಗಾರಿಕೆಯನ್ನು ಪ್ರಾರಂಭಿಸಲಾಗಿದೆ. ಮಲ್ಲಪ್ಪ ಶಾಫ್ಟಿನಲ್ಲಿ ೨೨, ೨೪, ೨೬ನೇ ಮಟ್ಟಗಳಲ್ಲಿ ಓರ್ ಪಾಸ್ ಸಿಸ್ಟಂ ಅನ್ನು ಅಗೆದು ತೋಡುವುದು, ೨೭ನೇ ಮಟ್ಟದಲ್ಲಿ ಪ್ಲಾಟ್ ಕಟಿಂಗ್ ಮತ್ತು ಮತ್ತಷ್ಟು ಆಳಪಡಿಸುವ ಕೆಲಸಗಳು ಮತ್ತು ಅಭಿವೃದ್ಧಿ ಕೆಲಸಗಳು ಕಾರ್ಯಕ್ರಮ ವೇಳಾಪಟ್ಟಿ ಪ್ರಕಾರ ಜರುಗುತ್ತಿವೆ.

ಈ ಕೆಲಸಗಳನ್ನು ೨೦೧೨ರೊಳಗೆ ಮುಗಿಸಲು ಯೋಜಿಸಲಾಗಿದ್ದು, ಆ ವೇಳೆಗೆ ಹೊಸ ಶಾಫ್ಟ್ ಕಾರ್ಯಾರಂಭ ಮಾಡಿದಾಗ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿ,ಅದೇ ಮಟ್ಟವನ್ನು ಕಾಯ್ದುಕೊಳ್ಳಲಾಗುವುದು.

ಹೊಸ ಬಂಡೆ ಒಡೆಯುವ ಯಂತ್ರಗಳನ್ನು ಮತ್ತು ಪುಡಿಗುಟ್ಟುವ ಯಂತ್ರವನ್ನು ಪ್ರಾರಂಭಿಸಿದ ಬಳಿಕ ಓರ್ ಪಾಸ್ ಸಿಸ್ಟಂ ಅನ್ನು ಸ್ಥಾಪಿಸಲಾಗುವುದು ಮತ್ತು ಉತ್ಪಾದನೆಯನ್ನು ಹೊಸ ಶಾಫ್ಟಿನಿಂದ ಮೇಲೆ ಮತ್ತು ಕೆಳಗೆ ಎರಡೂ ಮಟ್ಟಗಳಿಂದ ಮಾಡಲಾಗುವುದು.


DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.