image description


ಗಾಳಿ ಯಂತ್ರ


ಪುರಾತನ ಕಾಲದಿಂದಲೂ ಮಾನವ ಗಾಳಿಯನ್ನು ಸಾಗಾಟಿಕೆಗೆ ಉಪಯೋಗಿಸಿಕೊಂಡಿರುತ್ತಾನೆ. ಅದೇ ಪ್ರಕಾರ ಕಲ್ಲುಗಳನ್ನು ಬಳಸಿ ಕಾಳನ್ನು ಹಿಟ್ಟು ಮಾಡುವ ತಂತ್ರಜ್ಞಾನವು ಅಷ್ಟೇ ಪುರಾತನವಾದದ್ದು ಮತ್ತು ದೇಶದಲ್ಲೆಲ್ಲಾ ಹರಡಿತು. ಈ ಎರಡೂ ಶಕ್ತಿಗಳು ಎಲ್ಲಿ ಮತ್ತು ಯಾವಾಗ ಮೊದಲ ಗಾಳಿಯಂತ್ರದಲ್ಲಿ ಒಟ್ಟುಗೂಡಿದವೆಂದು ತಿಳಿದಿಲ್ಲ. ಆದರೆ ಪರ್ಷಿಯಾ ಮೂಲದಿಂದ ಜ್ಞಾನವು ಉತ್ತರ ಯುರೋಪಿಗೆ ಧರ್ಮಯುದ್ಧಗಳ ಫಲಿತಾಂಶವಾಗಿ ಹರಡಿದೆ ಎಂದು ತಿಳಿದುಬರುತ್ತದೆ. (ಕಾಳು ಬೀಸಲು/ಹಿಟ್ಟು ಮಾಡಲು ಗಾಳಿಯೇ ಮೊದಲ ಶಕ್ತಿಯಲ್ಲ, ಅದಕ್ಕೂ ಮೊದಲು ಪ್ರಾಣಿಗಳ ಶಕ್ತಿ ಮತ್ತು ನೀರಿನ ಶಕ್ತಿಯನ್ನು ಬಳಸಿಕೊಳ್ಳಲಾಗಿತ್ತು.).

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಚಿತ್ರದುರ್ಗ ಇಂಗಳದಾಳ್ ಗ್ರಾಮದಲ್ಲಿ, ತನ್ನ ಗಣಿಗಳಿಗೆ ಬೇಕಾದ ಗಾಳಿಶಕ್ತಿಯ ಉತ್ಪಾದನೆಯಲ್ಲಿ ಸ್ವಯಂಪರಿಪೂರ್ಣತೆ ಸಾಧಿಸಲು ಗಾಳಿಯಂತ್ರ ಸ್ಥಾಪಿಸಿದೆ. ಈ ೧೮ ಮೆ.ವ್ಯಾಟ್ ಯಂತ್ರವು ಕಂಪನಿಗೆ ಅಗತ್ಯ ಬಿದ್ದಾಗ ವಿದ್ಯುತ್ ಒದಗಿಸುತ್ತದೆ. ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಗ್ರಿಡ್ ಗೆ ಸರಬರಾಜು ಮಾಡಿ, ಅದನ್ನು ಹಟ್ಟಿಯಲ್ಲಿ ಬಳಕೆಗೆ ಪಡೆದುಕೊಳ್ಳಲಾಗುತ್ತದೆ. ಚಿತ್ರದುರ್ಗದಲ್ಲಿ ಮೂರು ಹಂತಗಳಲ್ಲಿ ೧೮ ಮೆ.ವ್ಯಾಟ್ ಗಾಳಿಯಂತ್ರ ಸ್ಥಾಪನೆಗೆ ತಗಲುವ ಖರ್ಚು ೭೮ ಕೋಟಿ ರೂ.ಗಳು.

ಈ ಗಾಳಿಯಂತ್ರದ ಸ್ಥಾಪನೆಯಿಂದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ವಾರ್ಷಿಕ ೬ಕೋಟಿ ರೂ.ಗಳನ್ನು ವಿದ್ಯುತ್ ಬಿಲ್ಲುಗಳಲ್ಲಿ ಉಳಿತಾಯ ಮಾಡುತ್ತಿದೆ. ಕಂಪನಿಯು ಹಾಲಿ ವಿದ್ಯುತ್ ಬಿಲ್ಲುಗಳ ಮೇಲೆ ವಾರ್ಷಿಕ ೨೬ಕೋಟಿ ರೂ.ಗಳನ್ನು ಪಾವತಿಸುತ್ತಿದೆ.

ಮೊದಲ ಹಂತದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ೪.೮ ಮೆ.ವ್ಯಾ.ಶಕ್ತಿಯ ಗಾಳಿಯಂತ್ರವನ್ನು ದಿನಾಂಕ ೧೨.೬.೨೦೦೬ರಂದು ೨೭ ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಿತು. ಎರಡನೇ ಹಂತದಲ್ಲಿ ೧೫೦೦ ಕಿ.ವ್ಯಾ. ಶಕ್ತಿಯ ಮೂರು ಯಂತ್ರಗಳನ್ನು(ಒಟ್ಟು ಸಾಮರ್ಥ್ಯ ೪.೫ ಮೆ.ವ್ಯಾ.) ೨೭೫೦ ಲಕ್ಷಗಳ ವೆಚ್ಚದಲ್ಲಿ ಸ್ಥಾಪನೆ ಮಾಡಲಾಯಿತು. ಇದನ್ನು ದಿನಾಂಕ ೨೩.೧.೨೦೦೮ರಂದು ಪ್ರಾರಂಭಿಸಲಾಯಿತು. ಮತ್ತು ಮೂರು ಯಂತ್ರಗಳು ಇಲ್ಲಿಯವರೆಗೆ ದಿನಾಂಕ ೧೫೫ ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದ್ದು ಅದರಿಂದ ೫೫೦ ಲಕ್ಷಗಳ ಆದಾಯ ಸಂಗ್ರಹಿಸಲಾಗಿದೆ.

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಚಿತ್ರದುರ್ಗದ ತನ್ನ ಗುತ್ತಿಗೆ ಸ್ಥಳದಲ್ಲಿ ಹೆಚ್ಚಿನ ೧೫೦೦ಕಿ.ವ್ಯಾ.ಸಾಮರ್ಥ್ಯದ ಯಂತ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. (ಒಟ್ಟು ಸಾಮರ್ಥ್ಯ ೧೦.೮ ಮೆ.ವ್ಯಾ.).ಈ ಹೆಚ್ಚಿನ ಯಂತ್ರವು ಒಮ್ಮೆ ಸ್ಥಾಪನೆಯದಲ್ಲಿ ಮತ್ತು ಚಾಲನೆಯಾದಲ್ಲಿ ವಾರ್ಷಿಕ ೯೮೫ ಲಕ್ಷ ರೂ.ಗಳ ಆದಾಯ ನಿರೀಕ್ಷಿಸಬಹುದು.

ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವು ಮುಂದಿನ ವರ್ಷಗಳಲ್ಲಿ ಇನ್ನೂ ಕೆಲವು ಗಾಳಿಯಂತ್ರಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.

 ಚಿತ್ರದುರ್ಗದಲ್ಲಿ ಸ್ಥಾಪಿಸಿರುವ ಗಾಳಿಯಂತ್ರಗಳು

DISCLAIMER   |   CONTACT US   |   visitors Hit Web Stats
Maintained by EDP division,HGML.Powered by BCITS.   Copyright © 2009 Hutti Gold Mines Company Ltd. All rights reserved.